‘ಭುಜಂಗ’ ಜುಲೈ ಮೊದಲ ವಾರದಲ್ಲಿ ತೆರೆಗೆ
Posted date: 13 Mon, Jun 2016 – 07:50:44 AM

ನಿರ್ಮಾಪಕ ವರುಣ ಮಹೇಶ್ ಅವರ ಪ್ರಥಮ ಕಾಣಿಕೆ ‘ಭುಜಂಗ’. ಸೆನ್ಸಾರ್ ಮಂಡಳಿಯಿಂದ ಯು/ ಎ ಅರ್ಹತಾ ಪತ್ರ ಪಡೆದು ಜುಲೈ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರಲು ಚಿತ್ರಮಂದಿರಗಳನ್ನು ಹೊಂದಿಸುವುದರಲ್ಲಿ ನಿರತವಾಗಿದೆ. ಜೀವ ಅವರ ನಿರ್ದೇಶನದ ಮೊದಲ ಪ್ರಯತ್ನ ಇದು.
ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಮುಖ್ಯ ತಾರಾಗಣದ ‘ಭುಜಂಗ’ ಚಿತ್ರದಲ್ಲಿ ಐಶ್ವರ್ಯ ಸಿಂಧೋಗಿ ಒಂದು ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಭುಜಂಗ’ ಸಿನಿಮಾದಲ್ಲಿ ಹಾಸ್ಯ, ಭಾವನೆಗಳ ಮೆರೆದಾಟ ಇದ್ದರೂ ಮಧ್ಯಂತರದ ನಂತರ ಪ್ರೇಕ್ಷಕನನ್ನು ಹಿಡಿದು ಕೂಡಿಸುವುದು ಸಾಹಸಗಳ ಸರೆಮಾಲೆ. ಮೂರು ವಿವಿಧ ರೀತಿಯ ಸಾಹಸಗಳ ಜೊತೆಗೆ ಮೂರು ಸಣ್ಣ ಸಾಹಸಗಳನ್ನು ಸಹ ಮಾಸ್ ಮಾದ ಸಂಯೋಜಿಸಿದ್ದಾರೆ.
ತಲಕಾಡು, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿರುವ ‘ಭುಜಂಗ’ ಚಿತ್ರದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಸಹ ಒಳಗೊಂಡಿದೆ.
ಸಂತೋಷ್, ಸಾಧು ಕೋಕಿಲ, ಜೈ ಜಗದೀಶ್, ಬುಲೆಟ್ ಪ್ರಕಾಶ್, ತಬಲಾ ನಾಣಿ, ಕಲ್ಯಾಣಿ, ಭಜರಂಗಿ ಚೇತನ್, ಕರಿ ಸುಬ್ಬು ಹಾಗೂ ಇತರರು ಪೋಷಕ ಕಲಾವಿದರಾಗಿರುವ ಈ ಚಿತ್ರದ ಐದು ಹಾಡುಗಳನ್ನು ಪೂರ್ಣಚಂದ್ರ ತೇಜಸ್ವಿ ಅವರು ಸಂಯೋಜನೆ ಮಾಡಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಬಿ ಎ ಮಧು ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಇದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed